Makara Sankranti Special - Surya Homa for Wisdom - 14, January

Pray for wisdom by participating in this homa.

Click here to participate

ಗಣೇಶನ ಶಕ್ತಿಯುತ ಮಂತ್ರಗಳೊಂದಿಗೆ ಜೀವನದ ಅಡೆತಡೆಗಳನ್ನು ನಿವಾರಿಸಿ

133.7K
20.1K

Comments

Security Code
29172
finger point down
ಸನಾತನ ಧರ್ಮದ ಕುರಿತು ವಿಶಿಷ್ಟ ಮಾಹಿತಿಯನ್ನು ಹೊಂದಿದೆ -ಧನ್ಯಾ ಹೆಗ್ಡೆ

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ಧಾರ್ಮಿಕ ವಿಷಯಗಳ ಬಗ್ಗೆ ಮತ್ತು ಎಲ್ಲಾ ತರಹ ಮಂತ್ರ ಗಳನ್ನು ತಿಳಿಯ ಪಡಿಸುತ್ತಿರುವುದರ ಬಗ್ಗೆ ನಿಮಗೆ ಧನ್ಯವಾದಗಳು. -ಶಿವಕುಮಾರ್ ಬಿ. ಸ್

ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

Read more comments

ಆಖುಧ್ವಜಾಯ ವಿದ್ಮಹೇ ವಕ್ರತುಂಡಾಯ ಧೀಮಹಿ
ತನ್ನೋ ವಿಘ್ನಃ ಪ್ರಚೋದಯಾತ್

Knowledge Bank

ಆಗಮಗಳು ಹಾಗೂ ತಂತ್ರಗಳು - ಪ್ರಾಯೋಗಿಕ ಸಿದ್ಧಾಂತ

ಆಗಮ ಹಾಗೂ ತಂತ್ರಗಳು ಪ್ರಾಯೋಗಿಕ ಆಚರಣೆಗಳ ಬಗ್ಗೆ ಹೆಚ್ಚು ಮಹತ್ವವನ್ನು ಕೊಡುತ್ತವೆ. ಅಂದರೆ ದಿನ ನಿತ್ಯದ ಜೀವನ ಕ್ರಮ ಹಾಗೂ ಆಧ್ಯಾತ್ಮಿಕ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಆಗಮಗಳು ದೇವತಾ ಪೂಜಾ ವಿಧಿ ವಿಧಾನಗಳು, ದೇವಾಲಯ ನಿರ್ಮಾಣ, ಅರ್ಚನೆ, ಆರಾಧನೆ ಇತ್ಯಾದಿ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಇವುಗಳು ದೇವಾಲಯ ವಾಸ್ತುಶಿಲ್ಪ, ಉತ್ಸವಾದಿಗಳ ಬಗ್ಗೆ ತಿಳಿಸಿ ಕೊಡುತ್ತವೆ. ಇಷ್ಟೇ ಅಲ್ಲದೆ, ದೇವತಾ ಪೂಜಾ ಕ್ರಮ, ಮಡಿ ,ಮೈಲಿಗೆ, ಇತ್ಯಾದಿಗಳ ಬಗ್ಗೆಯೂ ತಿಳುವಳಿಕೆಯನ್ನು ಕೊಡುತ್ತದೆ. ತಂತ್ರಗಳು ಆಂತರಿಕ ಸಾಧನೆಗಳ ಬಗ್ಗೆ ತಿಳಿಸಿಕೊಡುತ್ತದೆ. ಧ್ಯಾನ , ಯೋಗ, ಮಂತ್ರ, ಇವುಗಳನ್ನು ಒಳಗೊಂಡಿರುತ್ತದೆ. ತಂತ್ರಗಳು ವೈಯುಕ್ತಿಕ ಆಧ್ಯಾತ್ಮಿಕ ಸಾಧನೆಗೆ ಸಹಾಯ ಮಾಡುತ್ತವೆ. ದೈವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ವಿದ್ಯೆಯನ್ನು ಈ ಮೂಲಕ ತಿಳಿಯಬಹುದಾಗಿದೆ. ಆಗಮ ಹಾಗೂ ತಂತ್ರಗಳು ಜ್ಞಾನದಿಂದ ಕರ್ಮ ಪ್ರಯೋಗದ ಬಗ್ಗೆ ಮಾಹಿತಿ ಕೊಡುತ್ತವೆ. ಮಾನವರ ಆಧ್ಯಾತ್ಮಿಕ ಬದುಕಿಗೆ ಸಹಾಯ ಮಾಡುತ್ತವೆ. ಇವುಗಳಲ್ಲಿ ಕೇವಲ ಸಿದ್ಧಾಂತ ಮಾತ್ರವಲ್ಲದೆ ಪ್ರಾಯೋಗಿಕ ವಿಧಿ ವಿಧಾನಗಳನ್ನು ಹೇಳಲಾಗಿದೆ. ಆಗಮ ಹಾಗೂ ತಂತ್ರಗಳ ನೆರವಿನಿಂದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಜಟಿಲವಾದ ಸಮಸ್ಯೆಗಳಿಗೆ ಸರಳ ಉಪಾಯಗಳನ್ನು ಹೇಳಲಾಗಿದೆ. ಇದರಿಂದ ದಿನನಿತ್ಯದ ಬದುಕಿನಲ್ಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಆಗಮ ಹಾಗೂ ತಂತ್ರಗಳು ಆಧ್ಯಾತ್ಮಿಕತೆಯನ್ನು ಅರ್ಥೈಸಿಕೊಳ್ಳಲು ಅಗತ್ಯ.

ಶ್ರುತಿ ಮತ್ತು ಸ್ಮೃತಿ ನಡುವಿನ ವ್ಯತ್ಯಾಸವೇನು?

ಶ್ರುತಿ ಎಂದರೆ ವೇದ ಸಂಹಿತೆಗಳು, ಬ್ರಾಹ್ಮಣಗಳು, ಅರಣ್ಯಕಗಳು ಮತ್ತು ಉಪನಿಷತ್ತುಗಳನ್ನು ಒಳಗೊಂಡಿರುವ ಗ್ರಂಥಗಳ ಗುಂಪು. ಅವು ಋಷಿಗಳಿಗೆ ಮಂತ್ರಗಳ ರೂಪದಲ್ಲಿ ಪ್ರಕಟವಾದ ಶಾಶ್ವತ ಜ್ಞಾನ. ಅವರಿಗೆ ಯಾವುದೇ ಕರ್ತೃತ್ವವನ್ನು ಆರೋಪಿಸಲು ಸಾಧ್ಯವಿಲ್ಲ. ಋಷಿಗಳು ಬರೆದ ಸ್ಮೃತಿಗಳು ಶ್ರುತಿಯನ್ನು ಆಧರಿಸಿದ ನಿರೂಪಣೆಗಳಾಗಿವೆ.

Quiz

ಕ್ಷೀರಸಾಗರವನ್ನು ಮಥಿಸಲು ಯಾರನ್ನು ಹಗ್ಗವಾಗಿ ಬಳಸಲಾಯಿತು?
Mantras

Mantras

ಮಂತ್ರಗಳು

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...