ಕೃತಿಕಾ ನಕ್ಷತ್ರಮೇಷ ರಾಶಿಯಲ್ಲಿ ಇಪ್ಪತ್ತಾರು ಡಿಗ್ರಿ ನಲ್ವತ್ತು ನಿಮಿಷಗಳಿಂದ ವೃಷಭ ರಾಶಿಯಲ್ಲಿ ಹತ್ತು ಡಿಗ್ರಿಗಳವರೆಗೆ ವ್ಯಾಪಿಸಿರುವ ನಕ್ಷತ್ರವೇ ಕೃತಿಕಾ ನಕ್ಷತ್ರ. ವೈದಿಕ ಖಗೋಳ ಶಾಸ್ತ್ರದಲ್ಲಿ ಇದು ಮೂರನೆಯ ನಕ್ಷತ್ರ. ಆಧುನಿಕ ಖಗೋಳ ಶಾಸ್ತ್ರದಲ್ಲಿ, ಕೃತಿಕಾ ವು ಪ್ಲೆಯೆಡ್ಸ್ ಗೆ ಸಂಬಂಧಿಸಿದೆ.

Click below to listen to Veda Mantra of Krittika Nakshatra  

 

Krittika Nakshatra Veda Mantra

 

ಕೃತಿಕಾದ ನಕ್ಷತ್ರಾಧಿಪತಿ

ಅಗ್ನಿಯು ಕೃತಿಕಾ ನಕ್ಷತ್ರಾಧಿಪತಿ.

ಕೃತಿಕಾ ನಕ್ಷತ್ರದ ಗ್ರಹಾಧಿಪತಿ

ಸೂರ್ಯನು ಕೃತಿಕಾ ನಕ್ಷತ್ರದ ಗ್ರಹಾಧಿಪತಿ.

ಕೃತಿಕಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ಎರಡೂ ರಾಶಿಗಳಿಗೆ ಸಂಬಂಧಿಸಿದ್ದು

 • ಇಚ್ಚಾಶಕ್ತಿಯುಳ್ಳವರು
 • ಮಾತುಗಾರರು
 • ಕಲಾವಿದರು
 • ತೋರ್ಪಡಿಸಲು ಇಚ್ಚಿಸುವವರು
 • ತಂದೆ-ತಾಯಿಯರಿಂದ ಮತ್ತು ಒಡಹುಟ್ಟಿದವರಿಂದ ಕಡಿಮೆ ಸಹಕಾರ
 • ಶೀಘ್ರಕೋಪಿಗಳು
 • ಅಸ್ಪಷ್ಟತೆ ಉಳ್ಳವರು
 • ಬೇರೆಯವರು ತಮ್ಮನ್ನು ಟೀಕಿಸುವುದನ್ನು ಇಷ್ಟಪಡುವುದಿಲ್ಲ.
 • ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಾರೆ.


ಕೇವಲ ಮೇಷರಾಶಿ, ಕೃತಿಕಾ ನಕ್ಷತ್ರದವರಿಗೆ

 • ತುಂಬಾ ಸಕ್ರಿಯರು
 • ಆರೋಗ್ಯವಂತರು
 • ಪ್ರಗತಿ ಹೊಂದಲು ಉತ್ಸುಕರು
 • ನಾಯಕತ್ವದ ಗುಣಗಳುಳ್ಳವರು
 • ವಾದಿಸುವ ಮತ್ತು ಮನವರಿಕೆ ಮಾಡುವ ಶಕ್ತಿಯುಳ್ಳವರು
 • ಪ್ರಸಿದ್ಧರು
 • ಸ್ಪರ್ಧಿಸುವ ಪ್ರವೃತ್ತಿ
 • ಆಕ್ರಮಣಕಾರಿ ಗುಣವುಳ್ಳವರು
 • ವಿವಾಹೇತರ ಸಂಬಂಧಗಳನ್ನು ಹೊಂದುವ ಪ್ರವೃತ್ತಿಯುಳ್ಳವರು

 

ವೃಷಭರಾಶಿ ಕೃತಿಕಾ ನಕ್ಷತ್ರದವರಿಗೆ ಮಾತ್ರ

 • ನಾಗರಿಕ ಪ್ರಜ್ಞೆಯುಳ್ಳವರು
 • ಉತ್ತಮ ಆತಿಥೇಯರು
 • ಕರುಣಾಳುಗಳು
 • ಉತ್ತಮ ಸ್ನೇಹಿತರು
 • ಜೀವನವನ್ನು ಆನಂದಿಸುವವರು
 • ಜನಪ್ರಿಯರು
 • ಪ್ರಭಾವಶಾಲಿಗಳು
 • ಆಹ್ಲಾದಕರ ವ್ಯಕ್ತಿತ್ವದವರು
 • ಸೃಜನಾತ್ಮಕರು
 • ಯಶಸ್ವಿಗಳು
 • ಬುದ್ಧಿವಂತರು
 • ವ್ಯಾಪಾರ ಕೌಶಲ್ಯಗಳನ್ನು ಹೊಂದಿರುವವರು
 • ಊಹಿಸುವುದು ಮತ್ತು ಜೂಜಾಟದಲ್ಲಿ ಆಸಕ್ತಿ
 • ಪ್ರತಿಸ್ಪರ್ಧಿಗಳಿಗೆ ಕಠಿಣ ಮನಸ್ಕರು

ಕೃತಿಕಾ ನಕ್ಷತ್ರಕ್ಕೆ ಹೊಂದಾಣಿಕೆಯಾಗದ ನಕ್ಷತ್ರಗಳು

 • ಮೃಗಶಿರ
 • ಪುನರ್ವಸು
 • ಆಶ್ಲೇಷ
 • ಮೇಷರಾಶಿ, ಕೃತಿಕಾ ನಕ್ಷತ್ರದವರಿಗೆ – ವಿಶಾಖ 4ನೇ ಪಾದ, ಅನುರಾಧ, ಜ್ಯೇಷ್ಠ

ವೃಷಭರಾಶಿ, ಕೃತಿಕಾ ನಕ್ಷತ್ರದವರಿಗೆ – ಮೂಲ, ಪೂರ್ವಾಷಾಢ, ಉತ್ತರಾಷಾಢ 1ನೇ ಪಾದ.

ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಪ್ರಮುಖ ಕಾರ್ಯಗಳನ್ನು ಈ ನಕ್ಷತ್ರಗಳ ದಿನಗಳಂದು ಮಾಡಬಾರದು ಮತ್ತು ಈ ಜನ್ಮ ನಕ್ಷತ್ರಗಳಲ್ಲಿ ಹುಟ್ಟಿದವರೊಂದಿಗೆ ಪಾಲುದಾರಿಕೆಯನ್ನು ಹೊಂದಬಾರದು.

ಕೃತಿಕಾ ನಕ್ಷತ್ರದಲ್ಲಿ ಜನಿಸಿದವರ ಆರೋಗ್ಯ ಸಮಸ್ಯೆಗಳು

ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಈ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ

ಕೃತಿಕಾ – ಮೇಷರಾಶಿ

 • ಜ್ವರ
 • ಮಲೇರಿಯಾ
 • ಸಿಡುಬು
 • ದಡಾರ
 • ಮೆದುಳು ಜ್ವರ
 • ಅಪಘಾತಗಳು
 • ಗಾಯಗಳು
 • ಹುಣ್ಣು
 • ಸುಟ್ಟಗಾಯಗಳು
 • ಸ್ಫೋಟಗಳಿಂದ ಗಾಯ
 • ಫೈಲೇರಿಯಾಸಿಸ್ ಅಥವಾ ಆನೆಕಾಲು ರೋಗ

ಕೃತಿಕಾ – ವೃಷಭರಾಶಿ

 • ಮೊಡವೆಗಳು
 • ಕಣ್ಣಿನ ಕಾಯಿಲೆಗಳು
 • ಗಾಯಗಳು
 • ಟಾನ್ಸಿಲೈಟಿಸ್
 • ಕುತ್ತಿಗೆ ನೋವು ಮತ್ತು ಬಿಗಿತ
 • ಮೂಗಿನ ಪಾಲಿಪ್ಸ್
 • ಗುಳ್ಳೆಗಳು
 • ದದ್ದುಗಳು
 • ಮೂರ್ಛೆ ರೋಗ
 • ಮೊಣಕಾಲು ಗೆಡ್ಡೆ

ಕೃತಿಕಾ ನಕ್ಷತ್ರದವರ ವೃತ್ತಿ

ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸೂಕ್ತವಾದ ಕೆಲವು ವೃತ್ತಿಗಳು:

ಕೃತಿಕಾ ನಕ್ಷತ್ರ – ಮೇಷ ರಾಶಿಯವರಿಗೆ

 • ರಕ್ಷಣಾ ಸೇವೆಗಳು
 • ಆರಕ್ಷಕರು
 • ಉತ್ಪಾದನಾ ಕ್ಷೇತ್ರ
 • ವೈದ್ಯರು
 • ಶಸ್ತ್ರಚಿಕಿತ್ಸಕರು
 • ಭದ್ರತೆ
 • ರಾಸಾಯನಿಕಗಳು
 • ಆಯುಧಗಳು
 • ಸ್ಫೋಟಕಗಳು
 • ಅಗ್ನಿಶಾಮಕ ಮತ್ತು ಸುರಕ್ಷತೆ
 • ರಿಯಲ್ ಎಸ್ಟೇಟ್
 • ನಿರ್ಮಾಣ
 • ಉಕ್ಕು ಮತ್ತು ಹಿತ್ತಾಳೆ ಪಾತ್ರೆಗಳು
 • ಕ್ಷೌರದಂಗಡಿ
 • ಕುಂಬಾರಿಕೆ
 • ಅರ್ಚಕ ವೃತ್ತಿ
 • ಜ್ಯೋತಿಷಿ


ಕೃತಿಕಾ ನಕ್ಷತ್ರ – ವೃಷಭ ರಾಶಿಯವರಿಗೆ

 • ಸರ್ಕಾರಿ ಗುತ್ತಿಗೆ
 • ವಿದೇಶಿ ವ್ಯವಹಾರ
 • ಉಡುಪುಗಳು
 • ರತ್ನ ಮತ್ತು ಆಭರಣಗಳು
 • ಸಾಲ ವಸೂಲಾತಿ
 • ಕಲಾ ಪ್ರದರ್ಶನ
 • ಚಿತ್ರಕಲೆ ಮತ್ತು ಗ್ರಾಫಿಕ್ಸ್
 • ಶಿಲ್ಪಕಲೆ
 • ಛಾಯಾಗ್ರಹಣ
 • ರೇಷ್ಮೆ
 • ಅಂತರಾಷ್ಟ್ರೀಯ ವ್ಯಾಪಾರ
 • ಸೌಂದರ್ಯವರ್ಧಕಗಳು
 • ಒಳಾಂಗಣ ಅಲಂಕಾರ
 • ಆರೋಗ್ಯಾಧಿಕಾರಿ
 • ಇಂಜನೀಯರ್
 • ತೆರಿಗೆ ಅಧಿಕಾರಿ
 • ಲೈಂಗಿಕರೋಗತಜ್ಞ
 • ಉಣ್ಣೆ ಉದ್ಯಮ

ಕೃತಿಕಾ ನಕ್ಷತ್ರದವರು ವಜ್ರವನ್ನು ಧರಿಸಬಹುದೇ?

 • ಕೃತಿಕಾ ನಕ್ಷತ್ರ ಮೇಷರಾಶಿ - ಸೂಕ್ತವಲ್ಲ
 • ಕೃತಿಕಾ ನಕ್ಷತ್ರ ವೃಷಭರಾಶಿ - ಸೂಕ್ತ

ಕೃತಿಕಾ ನಕ್ಷತ್ರದವರ ಅದೃಷ್ಟ ರತ್ನ

ಪದ್ಮರಾಗ

ಕೃತಿಕಾ ನಕ್ಷತ್ರದವರ ಸೂಕ್ತವಾದ ಬಣ್ಣಗಳು

ಕೆಂಪು, ಕೇಸರಿ

ಕೃತಿಕಾ ನಕ್ಷತ್ರ ಪ್ರಾಣಿ – ಆಡು
ಕೃತಿಕಾ ನಕ್ಷತ್ರ ಮರ – ಅಂಜೂರದ ಮರ
ಕೃತಿಕಾ ನಕ್ಷತ್ರ ಪಕ್ಷಿ - ಶಿಕ್ರಾ
ಕೃತಿಕಾ ನಕ್ಷತ್ರ ನಕ್ಷತ್ರದ ಮೂಲಧಾತು - ಪೃಥ್ವಿ (ಭೂಮಿ)
ಕೃತಿಕಾ ನಕ್ಷತ್ರ ಗಣ – ಅಸುರ
ಕೃತಿಕಾ ನಕ್ಷತ್ರ ಯೋನಿ - ಮೇಕೆ (ಹೆಣ್ಣು)
ಕೃತಿಕಾ ನಕ್ಷತ್ರ ನಾಡಿ – ಅಂತ್ಯ
ಕೃತಿಕಾ ನಕ್ಷತ್ರ ಗುರುತು – ಕೊಡಲಿ

ಕೃತಿಕಾ ನಕ್ಷತ್ರಕ್ಕೆ ಹೆಸರುಗಳು

ಅವಕಹಡಾದಿ ಪದ್ಧತಿಯಲ್ಲಿ ಕೃತಿಕಾ ನಕ್ಷತ್ರದ ಹೆಸರಿನ ಪ್ರಾರಂಭದ ಅಕ್ಷರವು:

 • ಮೊದಲ ಪಾದ/ಚರಣ – ಅ
 • ಎರಡನೆಯ ಪಾದ/ಚರಣ – ಈ
 • ಮೂರನೆಯ ಪಾದ/ಚರಣ – ಊ
 • ನಾಲ್ಕನೆಯ ಪಾದ/ಚರಣ - ಏ

ಈ ಅಕ್ಷರಗಳನ್ನು ನಾಮಕರಣದ ಸಮಯದಲ್ಲಿ ಸಾಂಪ್ರದಾಯಕ ನಕ್ಷತ್ರದ ಹೆಸರಾಗಿ ಉಪಯೋಗಿಸಬಹುದು.

ಕೆಲವು ಸಮುದಾಯಗಳಲ್ಲಿ, ನಾಮಕರಣದ ಸಮಾರಂಭದಲ್ಲಿ ಅಜ್ಜ-ಅಜ್ಜಿಯರ ಹೆಸರನ್ನು ಇಡಲಾಗುತ್ತದೆ. ಆ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ತೊಂದರೆಯೂ ಇಲ್ಲ.

ದಾಖಲೆಗಳಿಗಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ಧೇಶಗಳಿಗಾಗಿ ಇಡುವ ಅಧಿಕೃತ ಹೆಸರು ಕೇವಲ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಗೊತ್ತಿರಬೇಕೆಂದು ಶಾಸ್ತ್ರವು ಸೂಚಿಸುತ್ತದೆ.

ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದವರ ಅಧಿಕೃತ ಹೆಸರಿನಲ್ಲಿ ಇಡಬಾರದ ಅಕ್ಷರಗಳೆಂದರೆ -

 • ಕೃತಿಕಾ ನಕ್ಷತ್ರ ಮೇಷರಾಶಿ - ಅಂ, ಕ್ಷ, ಚ, ಛ, ಜ, ಝ, ಯ, ರ, ಲ, ವ
 • ಕೃತಿಕಾ ನಕ್ಷತ್ರ ವೃಷಭ ರಾಶಿ - ಕ, ಖ, ಗ, ಘ, ಟ, ಠ, ಡ, ಢ, ಅ, ಆ, ಇ, ಈ, ಶ

ಕೃತಿಕಾ ನಕ್ಷತ್ರದವರ ವೈವಾಹಿಕ ಜೀವನ

ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದವರು ಆಕ್ರಮಣ ಮನೋಭಾವದವರು ಮತ್ತು ಜಗಳಗಂಟರು, ಅವರ ವೈವಾಹಿಕ ಜೀವನವು ಸಾಮಾನ್ಯವಾಗಿ ಪ್ರಕ್ಷುಬ್ಧವಾಗಿರುತ್ತದೆ. ಕುಟುಂಬದ ಹೊರಗಿನವರ ಬಗ್ಗೆ ಅವರು ಹೆಚ್ಚು ಕಾಳಜಿ ಹೊಂದಿರುತ್ತಾರೆ. ಸಂಗಾತಿಗೆ ನಿಷ್ಠೆಯಿಲ್ಲದ ನಡತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು.

ಕೃತಿಕಾ ನಕ್ಷತ್ರದ ಪರಿಹಾರಗಳು

ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಕುಜದೆಸೆ, ಬುಧದೆಸೆ ಮತ್ತು ಗುರುದೆಸೆಗಳು ಸಾಮಾನ್ಯವಾಗಿ ಅಶುಭ. ಅವರು ಈ ಕೆಳಕಂಡ ಪರಿಹಾರಗಳನ್ನು ಮಾಡಬಹುದು:

ಕೃತಿಕಾ ನಕ್ಷತ್ರ ಮಂತ್ರ

ಓಂ ಅಗ್ನಯೇ ನಮಃ

 

Copyright © 2023 | Vedadhara | All Rights Reserved. | Designed & Developed by Claps and Whistles
| | | | |