ಮೇಷ ರಾಶಿಯ ಸೊನ್ನೆ ಡಿಗ್ರಿಯಿಂದ ಹದಿಮೂರು ಡಿಗ್ರಿ ಇಪ್ಪತ್ತು ಮಿನಿಟ್ಸ್ ಹರಡಿರುವ ನಕ್ಷತ್ರವನ್ನು ಅಶ್ವಿನಿ ಎಂದು ಕರೆಯುತ್ತಾರೆ. ಇದು ವೈದಿಕ ಖಗೋಳಶಾಸ್ತ್ರದಲ್ಲಿ ಮೊದಲ ನಕ್ಷತ್ರ. ಆಧುನಿಕ ಖಗೋಳಶಾಸ್ತ್ರದಲ್ಲಿ, ಅಶ್ವಿನಿಯು ಮೇಷ ರಾಶಿಯ ಶಿರಸ್ಸನ್ನು ಬೀಟಾ ಮತ್ತು ಗಾಮಾ ಅರಿಯೇಟಿಸ್ ನಕ್ಷತ್ರಗಳನ್ನು ಜೊತೆ ಹೋಲುತ್ತದೆ. ಅಶ್ವಿನಿಯನ್ನು ವೇದಗಳಲ್ಲಿ ಅಶ್ವಯುಜ ಎಂದೂ ಕರೆಯುತ್ತಾರೆ.
Click below to listen to Ashwini Nakshatra Mantra
ಅಶ್ವಿನಿ ನಕ್ಷತ್ರವನ್ನು ಅಶ್ವಿನಿಯರು/ಅಶ್ವಿನಿಕುಮಾರರು ಆಳುತ್ತಾರೆ. ಅವರು ಸ್ವರ್ಗದ ವೈದ್ಯರು. ಸೂರ್ಯನ ಹೆಂಡತಿಯಾದ ಸಮ್ಜ್ಞಾ ಅವನ ಶಾಖವನ್ನು ತಡೆಯುವುದಿಲ್ಲ. ಆಕೆಯು ಒಂದು ಕುದುರೆಯಾಗಿ(ಸಂಸ್ಕೃತದಲ್ಲಿ ಅಶ್ವ) ತನ್ನನ್ನು ತಾನು ಬದಲಾಯಿಸಿಕೊಂಡು ತಪಸ್ಸಿಗೆ ಹೊರಟು ಹೋಗುತ್ತಾಳೆ. ಆ ಸಮಯದಲ್ಲಿ ಅವಳೊಂದಿಗೆ ಸೂರ್ಯನ ಮಿಲನವಾಗಿ ಅಶ್ವಿನಿಗಳು ಜನ್ಮತಳೆದರು.
ಕೇತು
ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರ ಗುಣಲಕ್ಷಣಗಳೆಂದರೆ:
ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರು ಈ ನಕ್ಷತ್ರಗಳ ದಿನಗಳಲ್ಲಿ ಮುಖ್ಯವಾದ ಕೆಲಸಗಳನ್ನು ಮಾಡಬಾರದು ಮತ್ತು ಈ ನಕ್ಷತ್ರಗಳ ಜನರೊಂದಿಗೆ ಪಾಲುದಾರಿಕೆಯನ್ನು ಮಾಡಬಾರದು.
ಅಶ್ವಿನಿ ನಕ್ಷತ್ರದ ಮೊದಲನೆಯ ಪಾದ/ಚರಣದವರು ಗಂಡಾಂತ ದೋಷದಿಂದ ನರಳುವರು. ಗಂಡಾಂತ ಶಾಂತಿಯನ್ನು ಮಾಡಬಹುದು. ಗಂಡಾಂತ ದೋಷದಲ್ಲಿ ಹುಟ್ಟಿದವರು ಕುಟುಂಬಕ್ಕೆ ಅಗೌರವ ಮತ್ತು ಮುಜುಗರವನ್ನು ತರಬಹುದು.
ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ರವಿ, ಕುಜ ಮತ್ತು ಗುರು ದೆಸೆಗಳು ಶುಭಕರವಲ್ಲ. ಅವರು ಈ ಕೆಳಕಂಡ ಪರಿಹಾರಗಳನ್ನು ಮಾಡಬಹುದು.
ಬುದ್ಧಿವಂತ, ಚುರುಕು ಮತ್ತು ಪರಿಶ್ರಮಿಗಳಾಗಿರುವುದರಿಂದ ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರು ಅವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸುವರು. ಅವರು ತಮ್ಮ ಉದ್ವೇಗ ಮತ್ತು ಹಠಾಟ್ ಪ್ರವೃತ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅಶ್ವನಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಕೆಲವು ಸೂಕ್ತ ವೃತ್ತಿಗಳು:
ಓಂ ಅಶ್ವಿನಾ ತೇಜಸಾ ಚಕ್ಷುಃ ಪ್ರಾಣೇನ ಸರಸ್ವತೀ ವೀರ್ಯಂ ವಾಚೇಂದ್ರೋ ಬಲೇಂದ್ರಾಯ ದಧುರಿಂದ್ರಿಯಂ
ಓಂ ಅಶ್ವಿನೀಕುಮಾರಾಭ್ಯಾಂ ನಮಃ
ಇಲ್ಲ. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ವಜ್ರವನ್ನು ಧರಿಸಬಾರದು. ಅದು ಹಾನಿಕಾರಕ
వైడూర్యం
ಅಶ್ವಿನಿ ನಕ್ಷತ್ರದ ಪ್ರಾಣಿ - ಕುದುರೆ
ಅಶ್ವಿನಿ ನಕ್ಷತ್ರದ ಮರ - ಸ್ಟ್ರಿಕ್ನೀನ್ ಅಥವಾ ಕುಚಲ ಮರ
ಅಶ್ವಿನಿ ನಕ್ಷತ್ರದ ಪಕ್ಷಿ - ಶಿಕ್ರಾ(ಬೇಟೆಯ ಹಕ್ಕಿ)
ಅಶ್ವಿನಿ ನಕ್ಷತ್ರದ ಮೂಲಧಾತು - ಪೃಥ್ವಿ (ಭೂಮಿ)
ಅಶ್ವಿನಿ ನಕ್ಷತ್ರದ ಗಣ – ದೇವ
ಅಶ್ವಿನಿ ನಕ್ಷತ್ರದ ಯೋನಿ - ಅಶ್ವ
ಅಶ್ವಿನಿ ನಕ್ಷತ್ರದ ನಾಡಿ - ಅದ್ಯಾ
ಅಶ್ವಿನಿ ನಕ್ಷತ್ರದ ಗುರುತು – ಕುದುರೆಯ ತಲೆ
ಅಶ್ವಿನಿ ನಕ್ಷತ್ರಕ್ಕೆ ಅವಕಹಡಾದಿ ಪದ್ದತಿಯಲ್ಲಿ ಹೆಸರಿನ ಪ್ರಾರಂಭದ ಅಕ್ಷರವು:
ಈ ಅಕ್ಷರಗಳನ್ನು ನಾಮಕರಣದ ಸಮಯದಲ್ಲಿ ಸಾಂಪ್ರದಾಯಕ ನಕ್ಷತ್ರದ ಹೆಸರಾಗಿ ಉಪಯೋಗಿಸಬಹುದು. ಕೆಲವು ಸಮುದಾಯಗಳಲ್ಲಿ, ನಾಮಕರಣದ ಸಮಾರಂಭದಲ್ಲಿ ಅಜ್ಜ-ಅಜ್ಜಿಯರ ಹೆಸರನ್ನು ಇಡಲಾಗುತ್ತದೆ. ಆ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ತೊಂದರೆಯೂ ಇಲ್ಲ.
ದಾಖಲೆಗಳಿಗಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಇಡುವ ಅಧಿಕೃತ ಹೆಸರು ಕೇವಲ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಗೊತ್ತಿರಬೇಕೆಂದು ಶಾಸ್ತ್ರವು ಸೂಚಿಸುತ್ತದೆ.
ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರ ಅಧಿಕೃತ ಹೆಸರಿನಲ್ಲಿ ಇಡಬಾರದ ಅಕ್ಷರಗಳೆಂದರೆ – ಅಂ, ಕ್ಷ, ಚ, ಛ, ಜ, ಝ, ಜ್ಞ, ಯ, ರ, ಲ, ವ
ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಯಾರೊಬ್ಬರ ನಿಯಂತ್ರಣದಲ್ಲಿರಲು ಇಷ್ಟಪಡುವುದಿಲ್ಲ. ಅವರು ತಮ್ಮ ವ್ಯಕ್ತಿತ್ವವನ್ನು ಗೌರವಿಸುವ ಜೀವನ ಸಂಗಾತಿಯನ್ನು ಹುಡುಕಬೇಕು. ಅವರು ಸಂಗಾತಿಗೆ ನಿಷ್ಠರಾಗಿರುತ್ತಾರೆ. ಅವರು ರಕ್ಷಣಾತ್ಮಕ ಮತ್ತು ಕಾಳಜಿಯುಳ್ಳವರು. ಅವರು ಸಂತೋಷದಿಂದ ಕುಟುಂಬದ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಸರಳ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಸಂಗಾತಿಯ ಅಗತ್ಯಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಮದುವೆಯ ನಂತರವೂ ಅವರು ತಮ್ಮ ತಂದೆ-ತಾಯಿಯರ ಮತ್ತು ಒಡಹುಟ್ಟಿದವರ ಜೊತೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ.
ವ್ಯಾಸರು ವೇದದ ಮುಖ್ಯಾಂಶವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿದ್ದರಿಂದ ಅವರನ್ನು ವೇದವ್ಯಾಸರೆಂದು ಕರೆಯಲಾಯಿತು.
ಇತಿಹಾಸ ಹಾಗೂ ಪುರಾಣಗಳೆರಡೂ ಚರಿತ್ರೆ ಯ ಆತ್ಮ ಹಾಗೂ ದೇಹವಿದ್ದಂತೆ. ಇತಿಹಾಸ (ರಾಮಾಯಣ ಮಹಾಭಾರತ ಗಳು)ವು ಚರಿತ್ರೆಯ ಆತ್ಮವನ್ನು ಪ್ರತಿನಿಧಿಸಿದರೆ, ಪುರಾಣವು, ಅದರ ದೇಹವಿದ್ದಂತೆ. ಪುರಾಣವಿಲ್ಲದೆ ಇತಿಹಾಸದ ಸಾರವು ಸ್ಪಷ್ಟವಾಗಿ ವ್ಯಕ್ತವಾಗಲಾರದು. ಪುರಾಣವು ಚರಿತ್ರೆ ಯ ಸಮಗ್ರ ತತ್ವ ವಾಗಿದ್ದು, ಬ್ರಹ್ಮಾಂಡದ ಅತ್ಯಮೂಲ್ಯ ವಿಷಯಗಳಾದ ಸೃಷ್ಟಿ, ದೇವತೆಗಳು ಹಾಗೂ ಪುರಾಣ ಪ್ರಸಿದ್ಧ ರಾಜರುಗಳ ವಂಶಾವಳಿಗಳು, ನೀತಿ ಕತೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಸೃಷ್ಟಿ ಯ ಜಟಿಲವಾದ ಸಂಗತಿಗಳು ಹಾಗೂ ಮನುಕುಲದ ಉತ್ಪತ್ತಿಯ ವಿಷಯದಲ್ಲಿ ಆಧುನಿಕ ವಿಜ್ಞಾನದ ಸಿದ್ಧಾಂತದೊಂದಿಗಿನ ಸಾಮ್ಯತೆ ಹಾಗೂ ವೈರುಧ್ಯಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸಿ, ಪ್ರತಿಪಾದಿಸುತ್ತದೆ
ಅನುವಾದ: ಡಿ.ಎಸ್.ನರೇಂದ್ರ
Astrology
Atharva Sheersha
Bhagavad Gita
Bhagavatam
Bharat Matha
Devi
Devi Mahatmyam
Festivals
Ganapathy
Glory of Venkatesha
Hanuman
Kathopanishad
Mahabharatam
Mantra Shastra
Mystique
Practical Wisdom
Purana Stories
Radhe Radhe
Ramayana
Rare Topics
Rituals
Rudram Explained
Sages and Saints
Shani Mahatmya
Shiva
Spiritual books
Sri Suktam
Story of Sri Yantra
Temples
Vedas
Vishnu Sahasranama
Yoga Vasishta
आध्यात्मिक ग्रन्थ
कठोपनिषद
गणेश अथर्व शीर्ष
गौ माता की महिमा
जय श्रीराम
जय हिंद
ज्योतिष
देवी भागवत
पुराण कथा
बच्चों के लिए
भगवद्गीता
भजन एवं आरती
भागवत
मंदिर
महाभारत
योग
राधे राधे
विभिन्न विषय
व्रत एवं त्योहार
शनि माहात्म्य
शिव पुराण
श्राद्ध और परलोक
श्रीयंत्र की कहानी
संत वाणी
सदाचार
सुभाषित
हनुमान