ಪತಿ ಮತ್ತು ಹೆಂಡತಿಯ ನಡುವೆ ಏಕತೆಗಾಗಿ ಶಕ್ತಿ ಗಣಪತಿ ಮಂತ್ರ
ತತ್ಪುರುಷಾಯ ವಿದ್ಮಹೇ ಶಕ್ತಿಯುಕ್ತಾಯ ಧೀಮಹಿ ತನ್ನೋ ವಿಘ್ನಃ ಪ್ರ....
Click here to know more..ಎಲ್ಲಾ ಆಸೆಗಳನ್ನು ಪೂರೈಸುವ ಮಂತ್ರ
ಪುನಸ್ತ್ವಾದಿತ್ಯಾ ರುದ್ರಾ ವಸವಃ ಸಮಿಂಧತಾಂ ಪುನರ್ಬ್ರಹ್ಮಾಣೋ ವ....
Click here to know more..ಹರಿವರಾಸನಂ ವಿಶ್ವಮೋಹನಂ
ಹರಿವರಾಸನಂ ವಿಶ್ವಮೋಹನಂ ಹರಿದಧೀಶ್ವರ- ಮಾರಾಧ್ಯಪಾದುಕಂ. ಅರಿವಿಮ....
Click here to know more..ಅಥ ಪ್ರಥಮಃ ಖಂಡಃ ಅನಂತಗುಣಪೂರ್ಣಾಯ ದೋಷದೂರಾಯ ವಿಷ್ಣವೇ |
ನಮಃ ಶ್ರೀಪ್ರಾಣನಾಥಾಯ ಭಕ್ತಾಭೀಷ್ಟಪ್ರದಾಯಿನೇ | ಮಂ ॥ ಬ್ರಹ್ಮಾ ದೇವಾನಾಂ ಪ್ರಥಮ: ಸಂಬಭೂವ ವಿಶ್ವಸ್ಯ ಕರ್ತಾ ಭುವನಸ್ಯ ಗೋಪ್ತಾ | ಸ ಬ್ರಹ್ಮವಿದ್ಯಾಂ ಸರ್ವವಿದ್ಯಾಪ್ರತಿಷ್ಠಾಮಥರ್ವಾಯ ಜೇಷ್ಠಪುತ್ರಾಯ ಪ್ರಾಹ ||1|| ಖಂಡಾರ್ಥ : ಅಧಿಕಾರಿಣಾಮಖಿಲಕ್ಷೇಶನಿವೃತ್ತಿವಿಶಿಷ್ಟಪರಮಾನಂದಾವಾಪ್ತಯೇ ಬ್ರಹ್ಮವಿದ್ಯಾಂ ವಸ್ತುಕಾಮೋ 'ಯೋ ಹ ವಾ ಅವಿದಿತಾರ್ಷ' ಇತ್ಯಾದಿಶ್ರುತೇ? ಋಷಿದೇವತಾಚ್ಛಂದೋಜ್ಞಾನಸ್ಯಾವಶ್ಯಕತ್ವಾದ್, 'ಯಯಾ ತದಕ್ಷರಮಧಿಗಮ್ಯತೇ' ಇತ್ಯಾದುಕಾ ದೇವತಾಜ್ಞಾನಸ್ಯ ಅಕ್ಷರಪರಿಗಣನಯಾ ತ್ರಿಷ್ಟುಬಾದಿಚ್ಛಂದೋಜ್ಞಾನಸ್ಯ ಚ ಸುಕರತ್ವಾತ್ ಋಷಿಪರಂಪರಾಮೇವಾಹ-ಬ್ರಷ್ಟೇತ್ಯಾದಿನಾ ಬ್ರಹ್ಮಾ ಚತುರ್ಮುಖಃ ದೇವಾನಾಂ ಶೇಷವೀಂದ್ರಾದೀನಾಂ ಪ್ರಥಮ: ದೇವೇಭ್ಯಃ ಪ್ರಾಥಮಿಕಸ್ಸನ್ ವಿಕ್ಟೋಸ್ಪಕಾಶಾತ್ ಸಂಬಭೂವ ಜಜ್ಜೆ। ತಸ್ಯ ಮಹಿಮಾನಮಾಹ-ವಿಶ್ವಕ್ಕೇತಿ|| ಗೋಪ್ತಾ ರಕ್ಷಕಃ!! ಕರ್ತೃತ್ವಾದ್ಯುತಿಸಸ್ಯಾಹತ್ವದ್ಯೋತನಾರ್ಥಾ | ಏತದುಕಿಪ್ರಾಪ್ತಸ್ವಾತಂತ್ರ್ಯಭ್ರಮನಿರಾಸಾಯ ವಿಷ್ಣುತಪ್ಪಂಭವೋಕ್ತಿರ್ಭಾಷ್ಟ್ರೀಸ ಬ್ರಹ್ಮಾ ಸರ್ವವಿದ್ಯಾಪ್ರತಿಷ್ಠಾಂ ಸರ್ವಾಃ ವಿದ್ಯಾ ಪ್ರತಿಷ್ಠಂತಿ ಯಸ್ಯಾಂ ತಾಂ ಯಜ್ಞಾನೇ ಸರ್ವವಿದ್ಯಾ: ವಿದಿತಫಲಾಃ ಭವಂತಿ ತಾದೃಶೀ ಬ್ರಹ್ಮವಿದ್ಯಾಂ, ವೇತಿ ಅನಯೇತಿ ವಿದ್ಯಾಂ ಬ್ರಹ್ಮಪ್ರಮಿತಿಜನಕಶಬ್ದರಾಶಿಂ ಜೇಷ್ಠಪುತ್ರಾಯ ವೈವಸ್ವತ ಮನ್ವಂತರೇ ಪ್ರಥಮತೋ ಜಾತಾಯಾಥರ್ವಾಯ ಅಥರ್ವನಾಮಕಾಯ ಅಕಾರಾಂತತ್ವಂ ಛಾಂದಸಂ, ಪ್ರಾಹ | ಅನಂತಗುಣಪೂರ್ಣನಾದ, ದೋಷದೂರನಾದ, ಶ್ರೀ ಪ್ರಾಣನಾಥನಾದ, ಭಕ್ತಾಭೀಷ್ಟಪ್ರದಾಯಕನಾದ ವಿಷ್ಣುವಿಗೆ ನಮಸ್ಕಾರವು, ಅಧಿಕಾರಿಗಳಿಗೆ ಸಕಲ ಕ್ಷೇಶ ನಿವೃತ್ತಿಪೂರ್ವಕವಾಗಿ ಪರಮಾನಂದ ಪ್ರಾಪ್ತಿಗೆ ಕಾರಣವಾದ ಬ್ರಹ್ಮವಿದ್ಯೆಯನ್ನು ಹೇಳಲಿಚ್ಚಿವುಳ್ಳವರಾಗಿ, ಯಾರು ಋಷ್ಯಾದಿಗಳ ಜ್ಞಾನವಿಲ್ಲದೆ ಅಧ್ಯಯನ ಮಾಡುವರೋ ಅವರುಗಳು ಅನರ್ಥವನ್ನು ಹೊಂದುವರಾದ್ದರಿಂದ ಋಷಿದೇವತೆಗಳ
ಜ್ಞಾನವು ಅತ್ಯಾವಶ್ಯಕವಾದದ್ದರಿಂದ 'ಯಯಾ ತದಕ್ಷರಮಧಿಗಮ್ಯತೆ' ಎಂಬ ವಾಕ್ಯದಿಂದ ದೇವತಾಜ್ಞಾನವು, ಅಕ್ಷರಗಳ ಗಣನೆಯಿಂದ ತ್ರಿಷ್ಟುಬಾದಿಗಳ ಜ್ಞಾನವು ಸುಲಭವಾದ್ದರಿಂದ, ಅವುಗಳನ್ನು ನಿರೂಪಿಸದೆ ಋಷಿಗಳ ಪರಂಪರೆಯನ್ನು ನಿರೂಪಿಸುತ್ತಾರೆ. ಬ್ರಹ್ಮ ಎಂಬುವುದರಿಂದ,
ಚತುರ್ಮುಖ ಬ್ರಹ್ಮದೇವರು, ದೇವತೆಗಳಿಗೆ ಪ್ರಥಮರಾಗಿ ಶ್ರೀವಿಷ್ಣುವಿನ ದೆಸೆಯಿಂದ ಉತ್ಪನ್ನರಾದರು. ಅವರು ಸಮಸ್ತ ಅಧಿಕಾರಿಜನಗಳಿಗೆ ಜ್ಞಾನೋಪದೇಶಕರ್ತರೂ ಆದ್ದರಿಂದಲೇ ಸಂಸಾರಭಯದಿಂದ ರಕ್ಷಕರೂ ಆಗಿದ್ದಾರೆ. ಬ್ರಹ್ಮದೇವರು ಆಪ್ತರಾಗಿದ್ದಾರೆಂದು ತಿಳಿಸಲು ಕರ್ತೃತ್ವಾದಿಗಳನ್ನು ಹೇಳಲಾಗಿದೆ. ಇದರಿಂದ ಉಂಟಾಗುವ ಬ್ರಹ್ಮದೇವರ ಸ್ವಾತಂತ್ರ್ಯಭ್ರಮವನ್ನು ಪರಿಹರಿಸಲು ಅವರಿಗೆ ಶ್ರೀ ವಿಷ್ಣುವಿನಿಂದ ಉತ್ಪತ್ತಿಯು ಭಾಷ್ಯದಲ್ಲಿ ಹೇಳಲ್ಪಟ್ಟಿದೆ. ಆ ಬ್ರಹ್ಮದೇವರು, ಯಾವ ವಿದ್ಯೆಯನ್ನು ತಿಳಿದರೆ ಎಲ್ಲಾ ವಿದ್ಯೆಗಳು ತಿಳಿಯಲ್ಪಟ್ಟ ಫಲವುಳ್ಳವುಗಳಾಗುತ್ತವೆಯೋ ಅಂತಹ ಬ್ರಹ್ಮವಿದ್ಯೆಯನ್ನು ಅಂದರೆ ಬ್ರಹ್ಮಜ್ಞಾನವನ್ನು ಹುಟ್ಟಿಸುವ ಶಬ್ಧರಾಶಿಯನ್ನು, ವೈವಸ್ವತಮನ್ವಂತರದಲ್ಲಿ ತಮ್ಮಿಂದ ಮೊದಲು ಉತ್ಪನ್ನರಾದ ಅಥರ್ವರೆಂಬ
ಋಷಿಗಳಿಗೆ ಹೇಳಿದರು.
ಮಂ || ಅಥರ್ವಣೇ ಯಾಂ ಪ್ರವದೇತ ಬ್ರಹ್ಮಾಥರ್ವಾ ತಾಂ ಪುರೋವಾಚಾಂಗಿರೇ ಬ್ರಹ್ಮವಿದ್ಯಾಮ್ | ಸ ಭಾರದ್ವಾಜಾಯ ಸತ್ಯವಹಾಯ ಪ್ರಾಹ ಭರದ್ವಾಜೋಂಗಿರಸೇ ಪರಾವರಾಮ್ ॥2॥
ಖಂಡಾರ್ಥ : ಪ್ರವದೇತ ಪ್ರಾವದದಿತ್ಯರ್ಥ: ವ್ಯತ್ಯಯೇನ ಲಂಗರ್ಥೇ ಲಿಂಗ್ | ಭಾಸನೋಪಸ೦ಭಾಷೇತ್ಯಾದಿನಾತ್ಮನೇ ಪದಮ್| ಸ್ಪಷ್ಟಮವದದಿತ್ಯರ್ಥ: ತಾಂ ಬ್ರಹ್ಮವಿದ್ಯಾಮಥರ್ವಾ ಅಂಗಿರೇ ಅಂಗಿರನಾಮಕಾಯ ಮುನಯೇ ಪುರಾ ಪೂರ್ವಮುವಾಚ। ಸ ಅಂಗಿರನಾಮಕೋ ಭಾರದ್ವಾಜಾಯ ಭರದ್ವಾಜಪತ್ರಾಯ ನಾಮ್ಮಾ ಸತ್ಯವಹಾಯ ಪ್ರಾಹ ತಾಂ ಬ್ರಹ್ಮವಿದ್ಯಾಮಿತ್ಯನುಷಂಗ: | ಭರದ್ವಾಜಃ ಅಂಗಿರಸೇ ಅಂಗಿರೋನಾಮಕಾಯ ತಾಂ ಬ್ರಹ್ಮವಿದ್ಯಾಂ ಪ್ರಾದೇತ್ಯನುಷಂಗ: ಬ್ರಹ್ಮವಿದ್ಯಾಂ ವಿಶಿನಂ - ಪರಾವರಾಮಿತಿ ॥ ಪರಾ ಚ ಸಾsವರಾ ಚ ಪರಾವರಾ, ತಾಂ ಪರಾವರಾಮ್ | ಏಕೈವ ವಿದ್ಯಾವಿವಕ್ಷಾಭೇದೇನ ಪರಾ ಅವರಾ ಚ ಭವತೀ | ಸಾ ಚ ಋಗಾದಿರೂಪೇತೃಗ್ರೇ ವ್ಯಕ್ತಾ
ಪ್ರವದೇತ ಎಂಬುದನ್ನು ಪ್ರಾವದತ್ ಎಂದು ಅರ್ಥೈಸಬೇಕು. ವೇದಗಳಲ್ಲಿ ಲಂಗ್ ಅರ್ಥದಲ್ಲಿ ಲಿಂಗ್ ಪ್ರತ್ಯಯಗಳು ಬರುತ್ತವೆ. ಬ್ರಹ್ಮದೇವರು ಯಾವು ಬ್ರಹ್ಮವಿದ್ಯೆಯನ್ನು ಅಥರ್ವರಿಗೆ ಹೇಳಿದರೋ, ಆ ಬ್ರಹ್ಮವಿದ್ಯೆಯನ್ನು ಅಥರ್ವಋಷಿಗಳು ಅಂಗಿರಾ ಎಂಬ ಮುನಿಗಳಿಗೆ ಮೊದಲು ಹೇಳಿದರು. ಆ ಅಂಗಿರರು ಭರದ್ವಾಜರ ಮಕ್ಕಳಾದ ಸತ್ಯವಹರಿಗೆ ಹೇಳಿದರು. ಆ ಬ್ರಹ್ಮವಿದ್ಯೆಯನ್ನು ಸತ್ಯವಹರು ಅಂಗಿರಸನಾಮಕ ಋಷಿಗಳಿಗೆ ಹೇಳಿದರು. ಆ ಒಂದೇ ಬ್ರಹ್ಮವಿದ್ಯೆಯು ವಿವಕ್ಷಾಭೇದದಿಂದ ಪರ ಮತ್ತು ಅಪರ ವಿದ್ಯೆಗಳೆಂದು ಆಗುತ್ತದೆ. ಆ ಬ್ರಹ್ಮವಿದ್ಯೆಯು ಋಗಾದಿರೂಪವಾಗಿದೆ ಎಂದು ಮುಂದೆ ವ್ಯಕ್ತವಾಗುತ್ತದೆ. ಮಂ|| ಶೌನಕೋ ಹ ವೈ ಮಹಾಶಾಲೋsಂಗಿರಸಂ ವಿಧಿವದುಪಸನ್ನ: ಪಪ್ರಚ್ಚ | ಕಸ್ಮಿನ್ನು ಭಗವೋ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತೀತಿ || 3 || ಖಂಡಾರ್ಥ : ಶೌನಕಃ ಶುನಕಪತ್ರ: ಮಹಾಶಾಲಃ, ಪ್ರತ್ಯಬ್ದಂ ಯಜ್ಞಕ್ಸನ್ಮಹಾಶಾಲ ಇತ್ಯುಕ್ತಃ, 'ಪ್ರತ್ಯಬ್ದಂ .ಯಜ್ಞಕೃತ್ ಸ೦ಯಕ್ . ಮಹಾಶಾಲ: ಪ್ರಕೀರ್ತಿತಃ' ಇತಿ ಛಾಂದೋಗ್ಯಭಾಸ್ಕೋಕ್ತಃ, ವಿಧಿವದ್ ವಿದ್ಯುಕ್ತಪ್ರಕಾರೇಜೋಪಸನ್ನ: ಉಪಸಂ ಪ್ರಾಪ್ತ: ಅಂಗಿರಸಂ ಪಪ್ರಚ್ಚ | ಹೇ ಭಗವೋ ಭಗವನ್, ಪೂಜ್ಯಪಾದೇತಿಯಾವರ್, ಮತುವನೋ ರೂಪ್ಟಂಬುದ್ ಛಂದಸೀತಿ ರೂಃ, ಸರ್ವಮಿದಂ ಕರ್ಮದೇವತಾದಿಕಂ ಮಯಾ ಜ್ಞಾತಂ ವರ್ತತೇ | ತಜ್ಞಾನಂ ಕಸ್ಮಿನ್ ಜ್ಞಾತೇ ಸಫಲಂ ಭವತಿ? ಯಜ್ಞಾನಾರ್ಥಂ ಸತ್ ಮೋಕ್ಷಾಖ್ಯಫಲವದ್ಯವತಿ ತನ್ನೇ ಪಚ್ಚತಿ ಯೋಜ್ಯಮ್ | ಹ ವಾ ಇತಿ ನಿಪಾತ: ಪ್ರಸಿದ್ಯರ್ಥಕಃ | ಪ್ರತಿ ಸಂವತ್ಸರದಲ್ಲಿಯೂ ಯಜ್ಞವನ್ನು ಅನುಷ್ಠಾನ ಮಾಡುವ ಶುನಕರ ಮಕ್ಕಳಾದ ಶೌನಕರು, ವಿಧಿಗನುಸಾರವಾಗಿ ಗುರುಗಳ ಉಪಸತ್ತಿಯನ್ನು ಹೊಂದುಕೊಂಡು ಅಂಗಿರಸರನ್ನು ಪ್ರಶ್ನಿಸಿದರು. ಪೂಜ್ಯರೇ, ಕರ್ಮದೇವತೆಗಳನ್ನು ತಿಳಿದಿದ್ದೇನೆ. ಆ ಜ್ಞಾನವು ಯಾರನ್ನು ತಿಳಿದರೆ ಫಲಿಸುತ್ತದೆ. ಯಾವುದನ್ನು ಜ್ಞಾನಮಾಡಿಕೊಂಡರೇ ಮೋಕ್ಷವೆಂಬ ಫಲವಾಗುತ್ತದೆ. ಆ ವಿಷಯವನ್ನು ನನಗೆ ತಿಳಿಸಿರಿ, ಹ, ವಾ ಈ ನಿಪಾತಗಳು ಪ್ರಸಿದ್ದಿಯನ್ನು ತಿಳಿಸುತ್ತವೆ.
Please wait while the audio list loads..
Ganapathy
Shiva
Hanuman
Devi
Vishnu Sahasranama
Mahabharatam
Practical Wisdom
Yoga Vasishta
Vedas
Rituals
Rare Topics
Devi Mahatmyam
Glory of Venkatesha
Shani Mahatmya
Story of Sri Yantra
Rudram Explained
Atharva Sheersha
Sri Suktam
Kathopanishad
Ramayana
Mystique
Mantra Shastra
Bharat Matha
Bhagavatam
Astrology
Temples
Spiritual books
Purana Stories
Festivals
Sages and Saints