ಅಕುಪರಾ ಎಂಬ ಆಮೆ

Akupara Tortoise


ಅಕುಪರಾ ಎಂಬುದು ಹಿಮಾಲಯದ ಒಂದು ಸರೋವರದಲ್ಲಿ ವಾಸಿಸುತ್ತಿದ್ದ ಒಂದು ಆಮೆಯ ಹೆಸರು. ಭೂಮಿಯ ಮೇಲೆ ತನ್ನ ಒಳ್ಳೆಯ ಕರ್ಮಗಳಿಂದ ಸಂಪಾದಿಸಿದ್ದ ಪುಣ್ಯವು ಸ್ಪಷ್ಟವಾಗಿ ಬರಿದಾದ ಮೇಲೆ ರಾಜಶ್ರೀ ಇಂದ್ರದ್ಯುಮ್ನ ಸ್ವರ್ಗಲೋಕದಿಂದ ಕೆಳಗೆ ಬಿದ್ದ. ಒಬ್ಬ ವ್ಯಕ್ತಿಯು ಎಲ್ಲಿಯವರೆಗೂ ಭೂಮಿಯ ಮೇಲೆ ಅವನ ಒಳ್ಳೆಯ ಕೆಲಸಗಳನ್ನು ಜನರು ನೆನಪಿಸಿಕೊಳ್ಳುವರೋ ಅಲ್ಲಿಯವರೆಗೆ ಮಾತ್ರ ಅವನು ಸ್ವರ್ಗಲೋಕದಲ್ಲಿ ಇರಬಹುದು ಎಂದು ಅವನಿಗೆ ಹೇಳಲಾಯಿತು.

ಇಂದ್ರದ್ಯುಮ್ನನು ಚಿರಂಜೀವಿ ಋಷಿಯಾದ ಮಾರ್ಕಂಡೆಯನ ಬಳಿ ಹೋದ ಮತ್ತು ನಿಮಗೆ ನನ್ನ ನೆನಪಿದೆಯೇ ಎಂದು ಕೇಳಿದ. ಆದರೆ ಋಷಿಗೆ ನೆನಪಿರಲಿಲ್ಲ. ನಂತರ ಅವರಿಬ್ಬರೂ ಋಷಿಗಿಂತ ಹೆಚ್ಚು ವಯಸ್ಸಾದ ಒಂದು ಗೂಬೆ ಮತ್ತು ಕೊಕ್ಕರೆಯ ಬಳಿ ಹೋದರು. ಅವರಿಗೂ ಅವನ ನೆನಪಿರಲಿಲ್ಲ.

ಆಗ, ಕಡೆಯದಾಗಿ ಸರೋವರದಲ್ಲಿ ಜೀವಿಸುತ್ತಿದ್ದ ಆಮೆ-ಅಕುಪರಾ ಇಂದ್ರದ್ಯುಮ್ನನನ್ನು 1000 ಯಾಗಗಳನ್ನು ಮಾಡಿದ ಶ್ರೇಷ್ಠ ರಾಜನೆಂದು ನೆನಪಿಸಿಕೊಂಡಿತು. ರಾಜನು ದಾನವಾಗಿ ಕೊಟ್ಟ ಹಸುಗಳ ಕಾಲಿನ ಗುರುತುಗಳಿಂದ ತಾನು ಜೀವಿಸುತ್ತಿರುವ ಸರೋವರವು ಉಂಟಾಯಿತೆಂದು ಅಕುಪರಾ ಹೇಳಿತು. ಇಂದ್ರದ್ಯುಮ್ನನನ್ನು ಈಗಲೂ ಭೂಮಿಯ ಮೇಲೆ ನೆನಪಿಸಿಕೊಳ್ಳುತ್ತಿರುವುದರಿಂದ ಅವನು ಸ್ವರ್ಗಕ್ಕೆ ಹಿಂತಿರುಗಬಹುದಿತ್ತು.

 

Click below to listen to Bhakthi Naadarchane 

 

Bhakthi Naadarchane | Selected Kannada Devotional Songs Jukebox | S.P Balasubrahmanyam

 

ಅನುವಾದ: ಡಿ.ಎಸ್.ನರೇಂದ್ರ

Kannada Topics

Kannada Topics

ಮಹಾಭಾರತ

Copyright © 2023 | Vedadhara | All Rights Reserved. | Designed & Developed by Claps and Whistles
| | | | |